Skip to main content
Version: 0.6.1

ಹೊಸ ಖಾತೆಯನ್ನು ರಚಿಸಿ

ಸ್ಕ್ರೈಬ್ ಅಪ್ಲಿಕೇಶನ್‌ನ ಸಹಾಯದಿಂದ ಅನುವಾದವನ್ನು ಪ್ರಾರಂಭಿಸಲು, ಬಳಕೆದಾರರು ಖಾತೆಯನ್ನು ಹೊಂದಿರಬೇಕು.

ಖಾತೆಯನ್ನು ರಚಿಸುವ ಕ್ರಮಗಳು

  • ಕಂಪ್ಯೂಟರ್‌ನಲ್ಲಿ ಸ್ಥಾಪಿಸಲಾದ ಸ್ಕ್ರೈಬ್ ಅಪ್ಲಿಕೇಶನ್ ತೆರೆಯಿರಿ
  • ಹೊಸ ಖಾತೆಯನ್ನು ರಚಿಸಿ ಬಟನ್ ಆರಿಸಿ
  • ಕಾಣಿಸಿಕೊಳ್ಳುವ ಪಾಪ್-ಅಪ್ ವಿಂಡೋದಲ್ಲಿ, ಬಳಕೆದಾರ ಹೆಸರನ್ನು ನಮೂದಿಸಿ ಮತ್ತು ಕ್ರಿಯೇಟ್ ಕ್ಲಿಕ್ ಮಾಡಿ
  • ಬಳಕೆದಾರರ ಖಾತೆಯನ್ನು ರಚಿಸಲಾಗುವುದು ಮತ್ತು ಬಳಕೆದಾರರು ಸ್ಕ್ರೈಬ್ ಅಪ್ಲಿಕೇಶನ್ ಬಳಸಲು ಪ್ರಾರಂಭಿಸಬಹುದು

ಅಸ್ತಿತ್ವದಲ್ಲಿರುವ ಬಳಕೆದಾರರಿಗೆ

  • ನೀವು ಈಗಾಗಲೇ ಖಾತೆಯನ್ನು ಹೊಂದಿದ್ದರೆ, ವ್ಯೂ ಮೋರ್ ಮೆನುವಿನಿಂದ ನಿಮ್ಮ ಬಳಕೆದಾರ ಹೆಸರನ್ನು ಆಯ್ಕೆ ಮಾಡಿ ಸೈನ್ ಇನ್ ಮಾಡಿ
  • ಇದು ಬಳಕೆದಾರರಿಗೆ ಸ್ಕ್ರೈಬ್ ನಲ್ಲಿ ಕೆಲಸ ಮಾಡಲು ಪ್ರಾಜೆಕ್ಟ್‌ಗಳ ಪುಟ ತೆರೆಯುತ್ತದೆ

ಸೈನ್ ಇನ್ ಫಂಕ್ಷನ್

ಪ್ರತ್ಯೇಕ ಪ್ರಾಜೆಕ್ಟ್ ಡೇಟಾವನ್ನು ನಿರ್ವಹಿಸುವಾಗ ಒಂದೇ ಅಪ್ಲಿಕೇಶನ್ ಅನ್ನು ಬಳಸಲು ಒಂದೇ ಕಂಪ್ಯೂಟರ್‌ನಲ್ಲಿ ಅನೇಕ ಬಳಕೆದಾರರನ್ನು ಸ್ಕ್ರೈಬ್ ಸಕ್ರಿಯಗೊಳಿಸುತ್ತದೆ. ಇದಕ್ಕೆ ಸಹಾಯ ಮಾಡಲು, ಸೈನ್ ಇನ್ ಪುಟದಲ್ಲಿ ವ್ಯೂ ಮೋರ್ ಆಯ್ಕೆ ಇದೆ. ಈ ವೈಶಿಷ್ಟ್ಯವು ಬಳಕೆದಾರರಿಗೆ ಸಕ್ರಿಯ ಮತ್ತು ನಿಷ್ಕ್ರಿಯ ಬಳಕೆದಾರರ ನಡುವೆ ಆಯ್ಕೆ ಮಾಡಲು ಅನುಮತಿಸುತ್ತದೆ.

ಹಂತಗಳು

  • ವ್ಯೂ ಮೋರ್ ಬಟನ್ ಮೇಲೆ ಕ್ಲಿಕ್ ಮಾಡಿ
  • ಪುಟದಲ್ಲಿ ಎರಡು ಆಯ್ಕೆಗಳಿವೆ, ಆಕ್ಟಿವ್   ಮತ್ತು ಆರ್ಕೈವ್‌ಡ್
  • ಸಕ್ರಿಯ ಬಳಕೆದಾರರ ಪಟ್ಟಿಯನ್ನು ಆಕ್ಟಿವ್ ವಿಭಾಗದಲ್ಲಿ ಪ್ರದರ್ಶಿಸಲಾಗುತ್ತದೆ
  • ಬಳಕೆದಾರರ ಹೆಸರಿನ ಪಕ್ಕದಲ್ಲಿರುವ ಡಿಲೀಟ್ ಬಟನ್ ಅನ್ನು ಕ್ಲಿಕ್ ಮಾಡುವ ಮೂಲಕ ನೀವು ನಿಷ್ಕ್ರಿಯ ಬಳಕೆದಾರರನ್ನು ಆರ್ಕೈವ್ ಮಾಡಬಹುದು
  • ಆಯ್ಕೆಮಾಡಿದ ಬಳಕೆದಾರ ಹೆಸರನ್ನು ಆರ್ಕೈವ್ ಮಾಡಲಾಗುತ್ತದೆ

ಆರ್ಕೈವ್ ಮಾಡಲಾದ ಬಳಕೆದಾರ ಹೆಸರನ್ನು ಮರುಸ್ಥಾಪಿಸಲು

  • ವ್ಯೂ ಮೋರ್ ಮೇಲೆ ಕ್ಲಿಕ್ ಮಾಡಿ
  • ಆರ್ಕೈವ್ ಟ್ಯಾಬ್ ಆಯ್ಕೆಮಾಡಿ
  • ಆರ್ಕೈವ್ ಮಾಡಲಾದ ಬಳಕೆದಾರರ ಹೆಸರುಗಳ ಪಟ್ಟಿ ಕಾಣಿಸಿಕೊಳ್ಳುತ್ತದೆ
  • ಬಳಕೆದಾರ ಹೆಸರಿನ ಮುಂದೆ, ರಿಸ್ಟೋರ್ ಐಕಾನ್ ಕ್ಲಿಕ್ ಮಾಡಿ
  • ಆಯ್ದ ಬಳಕೆದಾರ ಹೆಸರು ಆಕ್ಟಿವ್ ಪಟ್ಟಿಯಲ್ಲಿ ಕಾಣಿಸಿಕೊಳ್ಳುತ್ತದೆ